Latest from the Blog

ನದಿ ತಿರುವು ಯೋಜನೆ ವಿರುದ್ಧ ಜನಜಾಗೃತಿ, ಹೆದ್ದಾರಿ ತಡೆ ಪ್ರತಿಭಟನೆಗೆ ಸರ್ವ ಸಿದ್ಧತೆ: ಹರಿಪ್ರಕಾಶ ಕೋಣೆಮನೆ
ನದಿ ತಿರುವು ಯೋಜನೆ ವಿರುದ್ಧ ಜನಜಾಗೃತಿ, ಹೆದ್ದಾರಿ ತಡೆ ಪ್ರತಿಭಟನೆಗೆ ಸರ್ವ ಸಿದ್ಧತೆ: ಹರಿಪ್ರಕಾಶ ಕೋಣೆಮನೆ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಈ ಹೋರಾಟದ ಪೂರ್ವಭಾವಿಯಾಗಿ ಗುರುವಾರ ಸಂಜೆ ನಡೆದ ಪಟ್ಟಣ ವ್ಯಾಪ್ತಿಯ ಸಾರ್ವಜನಿಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ನದಿ ತಿರುವು ಯೋಜನೆಯನ್ನು ಜಿಲ್ಲೆಯ ಎಲ್ಲ ಜನರೂ ಒಕ್ಕೊರಲಿನಿಂದ ವಿರೋಧಿಸಬೇಕು, ಇದು ನಮ್ಮ ಜಿಲ್ಲೆಯ ಜನರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈ ಹೋರಾಟ ಯಾವುದೇ ಜಾತಿ, ಸಮುದಾಯದ್ದಲ್ಲ, ಜಿಲ್ಲೆಯ ಎಲ್ಲ ಜನರನ್ನು ಒಳಗೊಂಡ ಹೋರಾಟವಾಗಿದೆ. ಈಗಾಗಲೇ…
ಆಮಂತ್ರಣ ಬಿಡುಗಡೆಗೊಳಿಸಿದ ಸ್ವರ್ಣವಲ್ಲೀ ಶ್ರೀಗಳು: ಅ.25ರಂದು ಶ್ರೀಕೃಷ್ಣಾರ್ಪಣಂ ಸಮಾರಂಭ, ಭಗವದ್ಗೀತಾ ಅಭಿಯಾನ ಉದ್ಘಾಟನೆ.
ಆಮಂತ್ರಣ ಬಿಡುಗಡೆಗೊಳಿಸಿದ ಸ್ವರ್ಣವಲ್ಲೀ ಶ್ರೀಗಳು: ಅ.25ರಂದು ಶ್ರೀಕೃಷ್ಣಾರ್ಪಣಂ ಸಮಾರಂಭ, ಭಗವದ್ಗೀತಾ ಅಭಿಯಾನ ಉದ್ಘಾಟನೆ. ಈ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸ್ವರ್ಣವಲ್ಲೀ ಮಠದಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸುಜ್ಞಾನ ಸೇವಾ ಸಂಸ್ಥೆ ಅಧ್ಯಕ್ಷ ಹಾಗೂ ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ, ಪ್ರಮುಖರಾದ ಎಸ್.ವಿ.ಭಟ್ಟ ಹುಲಗಾನ, ಶ್ರೀಪಾದ ಭಟ್ಟ ಸಾತೊಡ್ಡಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಕೃಷ್ಣಾರ್ಪಣಂ ಸಮಾರಂಭ ಸುಜ್ಞಾನ…
ನದಿ ತಿರುವು ಯೊಜನೆ ಕೈಬಿಡುವಂತೆ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಮನವಿ
ನದಿ ತಿರುವು ಯೊಜನೆ ಕೈಬಿಡುವಂತೆ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಮನವಿ ಬೇಡ್ತಿ ಹಾಗೂ ಅಘನಾಶಿನಿ ನದಿಗಳನ್ನು ತಿರುಗಿಸಿ, ಬಯಲುಸೀಮೆಗೆ ನೀರು ಕೊಂಡೊಯ್ಯುವ ಬೃಹತ್ ನದಿ ಜೋಡಣೆ ಯೋಜನೆಗಳನ್ನು ಸರ್ಕಾರಗಳು ಕೈಗೊಳ್ಳುತ್ತಿವೆ. ಇಲ್ಲಿನ ಕೃಷಿ, ಪರಿಸರ, ನೀರಿನ ಲಭ್ಯತೆ, ಪರಿಸರ ಹಾಗೂ ಜನಜೀವನಕ್ಕೆ ಇದು ಮಾರಕವಾಗಲಿದೆ. ಜಿಲ್ಲೆಯ ಪರಿಸರ ಹಾಗೂ ಜನಜೀವನವು ಈಗಾಗಲೇ ಹಲವಾರು ಬೃಹತ್ ವಿನಾಶಕಾರಿ ಯೋಜನೆಗಳಿಂದ ನಲುಗಿದೆ. ಆದರೂ, ಹೊಸ ಹೊಸ ಯೋಜನೆಗಳು ಪ್ರಸ್ತಾಪವಾಗುತ್ತಲೇ ಇವೆ. ಯೋಜನೆಯನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ…
ಮೈತ್ರಿ ಕಲಾ ಬಳಗದಲ್ಲಿ ಶಾರದೋತ್ಸವ
ಮೈತ್ರಿ ಕಲಾ ಬಳಗದಲ್ಲಿ ಶಾರದೋತ್ಸವ ಸಾಂಸ್ಕತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ ಮಾತನಾಡಿ ಮೈತ್ರಿಬಳಗವು ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕøತಿಕ ಕೇಂದ್ರವಾಗಿ ಹತ್ತಾರು ವರ್ಷಗಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಸುತ್ತಮುತ್ತಲಿನ ಅನೇಕ ಹಳ್ಳಿಯ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿದೆ. ಬಳಗಕ್ಕೆ ಇನ್ನೂ ಹೆಚ್ಚಿನ ಸಾಂಸ್ಕೃತಿಕ ಶಕ್ತಿಯನ್ನು ದೇವತೆ ಒದಗಿಸಲಿ. ಎಂದರು. ವೇದಿಕೆಯಲ್ಲಿ ವಿಶ್ವೇಶ್ವರ ಗಾಂವ್ಕರ ಕಲ್ಮನೆ ವಜ್ರಳ್ಳಿ ಗ್ರಾಮ ಪಂಚಾಯತ ಮಾಜಿ ಸದಸ್ಯ ಜಿ. ಅರ್. ಭಾಗ್ವತ, ಶಿಕ್ಷಕ ನಾಗರಾಜ…
ಬರಪೀಡಿತ ತಾಲೂಕುಗಳಲ್ಲಿ ರೈತರ ಸಾಲ ವಸೂಲಿಗೆ ಬಲವಂತ ಮಾಡಿದರೆ ಕ್ರಮ: ಡಾ. ದಿಲೀಷ್ ಶಶಿ
ಬರಪೀಡಿತ ತಾಲೂಕುಗಳಲ್ಲಿ ರೈತರ ಸಾಲ ವಸೂಲಿಗೆ ಬಲವಂತ ಮಾಡಿದರೆ ಕ್ರಮ: ಡಾ. ದಿಲೀಷ್ ಶಶಿ ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿಯ ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯ ಮುಂಡಗೋಡು, ಯಲ್ಲಾಪುರ, ಅಂಕೋಲಾ, ಭಟ್ಕಳ, ಹಳಿಯಾಳ, ಶಿರಸಿ, ಜೋಯಿಡಾ, ದಾಂಡೇಲಿ ತಾಲೂಕುಗಳನ್ನು ಸರ್ಕಾರವು ಬರಪೀಡಿತ ಎಂದು ಘೋಷಣೆ ಮಾಡಿದ್ದು, ಈ ತಾಲೂಕುಗಳಲ್ಲಿ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಮತ್ತು ಕೃಷಿ ಆಧಾರಿತ ಉದ್ಯಮಗಳಿಗೆ ರೈತರು ಪಡೆದಿರುವ…
ಭಾರತದ ನೌಕಾಶಕ್ತಿಗೆ ಐಎನ್ಎಸ್ ಸಮರ್ಥಕ್ ಬಲ : ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್
ಭಾರತದ ನೌಕಾಶಕ್ತಿಗೆ ಐಎನ್ಎಸ್ ಸಮರ್ಥಕ್ ಬಲ : ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕಾರವಾರ: ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ನಿರ್ಮಿತ ಬಹು ಉದ್ದೇಶದ ನೌಕೆ “ಐಎನ್ಎಸ್ ಸಮರ್ಥಕ್” ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಹೆಚ್ಚಿನ ಬಲ ನೀಡಿದೆ ಎಂದು ಭಾರತದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು. ಅವರು ಶುಕ್ರವಾರ ಕಾರವಾರದ ಕದಂಬ ನೌಕಾನೆಲೆಯಲ್ಲಿ ಐಎನ್ಎಸ್ ಸಮರ್ಥಕ್ನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಿ ಮಾತನಾಡಿದರು. ಐಎನ್ಎಸ್ ಸಮರ್ಥಕ್ ಸೇರ್ಪಡೆಯು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆ…
ಉದ್ಯೋಗಾವಕಾಶ: ನೇರ ಸಂದರ್ಶನದ ಮೂಲಕ ಹುದ್ದೆಗಳ ಭರ್ತಿ
ಉದ್ಯೋಗಾವಕಾಶ: ನೇರ ಸಂದರ್ಶನದ ಮೂಲಕ ಹುದ್ದೆಗಳ ಭರ್ತಿ ಈ ಸಂದರ್ಶನದಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ, ಉದ್ಯೋಗದ ಸ್ಥಳ ಕಾರವಾರ, ಭಟ್ಕಳ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್ ಪ್ರತಿಯೊಂದಿಗೆ, ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ: 9620902330, 8277005959 ಅಥವಾ ಕಚೇರಿ ದೂರವಾಣಿ ಸಂಖ್ಯೆ: 08382-226386 ನ್ನು ಸಂಪರ್ಕಿಸುವಂತೆ ಯೋಜನಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ============
ನದಿ ತಿರುವು ಯೋಜನೆಗೆ ವ್ಯಾಪಕ ವಿರೋಧ, ವಿವಿದೆಡೆ ರಸ್ತೆ ತಡೆ ಪ್ರತಿಭಟನೆಯ ಪೂರ್ವಭಾವಿ ಸಭೆ
ನದಿ ತಿರುವು ಯೋಜನೆಗೆ ವ್ಯಾಪಕ ವಿರೋಧ, ವಿವಿದೆಡೆ ರಸ್ತೆ ತಡೆ ಪ್ರತಿಭಟನೆಯ ಪೂರ್ವಭಾವಿ ಸಭೆ ನಮ್ಮ ಹೋರಾಟಕ್ಕೆ ಜಯ ಖಂಡಿತ ಸಿಗುತ್ತದೆ: ಕೋಣೆಮನೆ ಭಾವನಾತ್ಮಕವಾಗಿ ನಾವು ವಾಸಿಸುವ ನಮ್ಮ ಪರಿಸರದೊಂದಿಗೆ ಸಂಬಂಧವನ್ನು ಅಗಾಧ ಇರಿಸಿಕೊಂಡಿದ್ದೇವೆ. ಈ ನೆಲದಲ್ಲಿ ಜೀವನ ಕಟ್ಟಲು ನಮ್ಮ ಹರಿವ ನೀರು ನಮ್ಮದೇ. ನಮ್ಮ ಬೇಡ್ತಿ ನದಿಗಳನ್ನು ತಿರುಗಿಸುವ ಯೋಜನೆ ಅವೈಜ್ಞಾನಿಕವಾದದ್ದು. ನಮ್ಮ ಜಿಲ್ಲೆಯ ಧಾರಣ ಶಕ್ತಿ ಕಡಿಮೆ ಇರುವ ಹೊತ್ತಿನಲ್ಲಿ ಹೊಸ ಯೋಜನೆಗಳು ಆತಂಕದ ನಡುವೆ ನಮ್ಮ ಕೂಗು ಸರ್ಕಾರಕ್ಕೆ ತಲುಪಿ ಯೋಜನೆ…
ಕಲಾಲೋಕದ ಮೇರು ಸಾಧಕರ ಅಗಲಿಕೆಗೆ ಸಂಸದ ಕಾಗೇರಿ ಸಂತಾಪ
ಕಲಾಲೋಕದ ಮೇರು ಸಾಧಕರ ಅಗಲಿಕೆಗೆ ಸಂಸದ ಕಾಗೇರಿ ಸಂತಾಪ ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ತಮ್ಮ ಗಂಭೀರ ಕಂಠ, ಸ್ಪಷ್ಟ ವಾಕ್ಸರಣಿ ಹಾಗೂ ಸಾತ್ವಿಕ-ಪ್ರೌಢ ಪಾತ್ರಪೋಷಣೆಯ ಮೂಲಕ ರಂಗಕ್ಕೆ ಅಪೂರ್ವ ತೂಕ ತಂದುಕೊಟ್ಟ ಬಡಗುತಿಟ್ಟಿನ ದಿಗ್ಗಜ ಯಕ್ಷಕಲಾವಿದ ಶ್ರೀಪಾದ ಭಟ್ ಥಂಡಿಮನೆ ಹಾಗೂ ದಶಕಗಳ ಕಾಲ ನಾದೋಪಾಸನೆಯಲ್ಲೇ ಬದುಕನ್ನು ಸವೆಸಿ, ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದ ಹಿರಿಯ ಸಂಗೀತ ತಪಸ್ವಿ ಪಂಡಿತ್ ನಾಗಭೂಷಣ ಹೆಗಡೆ ಬಾಳೆಹದ್ದ ಅವರ ಅಗಲಿಕೆ ಕಲಾಜಗತ್ತಿಗೆ ಎಂದೂ ತುಂಬಲಾರದ…
ಗಾಯಾಳುವಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯ
ಗಾಯಾಳುವಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯ ಘಟನೆಯ ವಿವರ ಮಂಗಳವಾರ ಸಂಜೆ ಯಲ್ಲಾಪುರ ತಾಲೂಕಿನ ಶಿರಸಿ ರಸ್ತೆಯ ಮಂಚಿಕೇರಿ ಸಮೀಪದ ತೂಕದಬೈಲ್ ನಲ್ಲಿ ಕಲಘಟಗಿಯ ಮಾರುತಿ ಎಂಬ ವ್ಯಕ್ತಿ ಬೈಕ್ ಸ್ಕಿಡ್ ಆಗಿ ಬಿದ್ದ ಒದ್ದಾಡುತ್ತಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು 108 ಸಂಖ್ಯೆಗೆ ಪೊನ್ ಮಾಡಿದರೆ ಅಂಬ್ಯಲೆನ್ಸ್ ಗೆ ಡ್ರೈವರ್ ಇಲ್ಲಾ ಎಂದು ಉತ್ತರ ಸಿಕ್ಕಿದೆ. ನಂತರ ಮಂಚಿಕೇರಿ ಆಸ್ಪತ್ರೆಯ ಅಂಬ್ಯುಲೆನ್ಸ್ ಗೆ ಪೊನ್ ಮಾಡಿದರೆ ಸರ್ವಿಸ್ ಗೆ ಹೋಗಿದೆ ಎಂದು ಮಾಹಿತಿ…
ನದಿ ಜೋಡಣೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ದ್ವಂದ ನಿಲುವು ಏಕೆ?
ನದಿ ಜೋಡಣೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ದ್ವಂದ ನಿಲುವು ಏಕೆ? ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಶಿರಸಿಯಲ್ಲಿ ನಡೆದ ಬೃಹತ್ ಸಮಾವೇಶ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ನದಿ ತಿರುವು ಯೋಜನೆ ವಿರೋಧಿ ಪ್ರತಿಭಟನೆಯಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರು ಯೋಜನೆಯನ್ನು ಕೈಬಿಡುವಂತೆ ಗಟ್ಟಿಯಾಗಿ ಆಗ್ರಹಿಸಿದ್ದರು. ಅವರ ವಿರೋಧ ಸ್ವಾಗತಾರ್ಹ. ಆದರೆ, ಜನರ ಹಿತಾಸಕ್ತಿಯ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ವ್ಯಕ್ತವಾಗುವ ಕಾಳಜಿ ಮುಖ್ಯಮಂತ್ರಿ ಎದುರು ಯಾಕೆ ಕಾಣಿಸುತ್ತಿಲ್ಲ ಎಂಬುದು ಜನರ…
ಶಾರದಾಂಬಾ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವ
ಶಾರದಾಂಬಾ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವ ಈ ನಿಮಿತ್ತ ದೇವಾಲಯದಲ್ಲಿ ಪ್ರತಿ ನಿತ್ಯ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ದೇವಾಲಯದ ಪ್ರಧಾನ ಅರ್ಚಕ ವಿ.ಗೋಪಾಲಕೃಷ್ಣ ಭಟ್ಟ ಕುಂಕಿಪಾಲ ನೇತ್ರತ್ವದಲ್ಲಿ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಅಪಾರ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸುತ್ತಿರುವ ಭಕ್ತರು ಶಾರದಾಂಬಾ ದೇವರ ಸನ್ನಿಧಿಯಲ್ಲಿ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ, ಉಡಿ ಸೇವೆ, ಹಣ್ಣು ಕಾಯಿ ಸೇವೆ ಮುಂತಾದ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ದೇವಾಲಯದಲ್ಲಿ ಪ್ರತಿನಿತ್ಯ ಭಜನೆ, ಶಾಂಕರ ಸ್ತ್ರೋತ್ರ ಪಠಣ, ಭಗವದ್ಗೀತಾ ಪಠಣ…
ನದಿ ತಿರುವ ಯೋಜನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾ.ಪಂ.ಮಟ್ಟದಲ್ಲಿ ಸಂಪರ್ಕ ಸಭೆ
ನದಿ ತಿರುವ ಯೋಜನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾ.ಪಂ.ಮಟ್ಟದಲ್ಲಿ ಸಂಪರ್ಕ ಸಭೆ ಯಲ್ಲಾಪುರ ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ನದಿ ತಿರುವು ಯೋಜನೆ ಸ್ಥಗಿತಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಮ್ಮ ಹೋರಾಟ ಯಶಸ್ವಿಯಾಗಬೇಕು ಎಂದರು. ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯೋಜನೆಯಿಂದ ನಮ್ಮ ಪರಿಸರ, ಜನಜೀವನದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಹೋರಾಟದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮಾಡಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ…
ಯೋಗಿ ಶಿಕ್ಷಣ ಮತ್ತು ಉದ್ಯೋಗ ಸಂಸ್ಥೆಯಿಂದ ಉದ್ಯೋಗ ತರಬೇತಿ ಕೋರ್ಸ್ ಆರಂಭ
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವಕ ಮತ್ತು ಯುವತಿಯರಿಗೆ ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ ಎಂದರೆ ಉದ್ಯೋಗ. ದೊಡ್ಡ ದೊಡ್ಡ ಕೋರ್ಸ್ ಕಲಿತು ಕೆಲಸದಿಂದ ವಂಚಿತರಾದವರಿಗೆ, ಶಾಲೆ ಕಾಲೇಜ್ ಅನ್ನು ಕಲಿತು ಅರ್ಧಕ್ಕೆ ಬಿಟ್ಟ ವಿದ್ಯಾರ್ಥಿಗಳಿಗೆ, ಅಥವಾ ಕೌಶಲ್ಯ ಯುತ ಕೋರ್ಸ್ ಕಲಿತು ತಮ್ಮ ಕಾಲ ಮೇಲೆ ತಾವು ನಿಲ್ಲಲು ಬಯಸುವ ಅದೆಷ್ಟೋ ಜನರಿಗೆ ಆಶಾಕಿರಣವಾಗಿ ಕಳೆದ 15 ವರ್ಷಗಳಿಂದ ಯಲ್ಲಾಪುರದಲ್ಲಿ ಎಜುಕೇಶನ್ ಸ್ಪೆಷಲಿಸ್ಟ್ ಮತ್ತು ನ್ಯಾಷನಲ್ ಮೈಂಡ್ ಅಂಡ್ ಮೆಮೊರಿ ಟ್ರೈನರ್ (national mind memory)…
ಬಂಗಾರದ ಹಾಗೂ ವಜ್ರಾಭರಣಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟಕ್ಕೆ ಉದ್ಯಮಿ ಬಾಲಕೃಷ್ಣ ನಾಯಕ ಚಾಲನೆ
ಬಂಗಾರದ ಹಾಗೂ ವಜ್ರಾಭರಣಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ಅ.11ರಿಂದ ಅ.14 ರವರೆಗೆ ಬಂಗಾರದ ಹಾಗೂ ವಜ್ರಾಭರಣಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಉದ್ಯಮಿ ಬಾಲಕೃಷ್ಣ ನಾಯಕ ಅವರು ಸ್ವರ್ಣ ಸಂಸ್ಥೆಯ ಬಂಗಾರ ಹಾಗೂ ವಜ್ರಾಭರಣಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವಾಸಾರ್ಹ ವ್ಯವಹಾರ ಹಾಗೂ ಶ್ರೇಷ್ಠ ಗುಣಮಟ್ಟದ ಬಂಗಾರ, ಬೆಳ್ಳಿ ಮತ್ತು ವಜ್ರಾಭರಣಗಳ ಮಾರಾಟಕ್ಕೆ ಹೆಸರುವಾಸಿಯಾದ ಸ್ವರ್ಣ ಸಂಸ್ಥೆಯವರು ದಸರಾ ಹಬ್ಬದ ಸಂದರ್ಭದಲ್ಲಿ ಯಲ್ಲಾಪುರದಲ್ಲಿ ಬಂಗಾರ…
ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಧಮಾಕಾ ಸೇಲ್! ಭರ್ಜರಿ ಆಫರ್!!
ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಧಮಾಕಾ ಸೇಲ್! ಭರ್ಜರಿ ಆಫರ್!! ರಿಯಾಯಿತಿ ದರದಲ್ಲಿ ಗುಣಮಟ್ಟದ ಬಟ್ಟೆ ಖರೀದಿಸಿ, ಭರ್ಜರಿ ಆಫರ್ ಪಡೆಯಿರಿ ಗುಣಮಟ್ಟದ ಬಟ್ಟೆಗಳ ಮಾರಾಟಕ್ಕೆ ಹೆಸರಾದ ಮತ್ತು ವಿಶ್ವಾಸಾರ್ಹ ವ್ಯವಹಾರದಿಂದ ಗ್ರಾಹಕರ ಮನಗೆದ್ದ ಯಲ್ಲಾಪುರ ಪಟ್ಟಣದಲ್ಲಿ ವಿಫುಲ ಬಟ್ಟೆಗಳ ಸಂಗ್ರಹದ ಅತೀ ದೊಡ್ಡ ಮಳಿಗೆಯಾದ ಎಂ.ಕೆ.ಬಿ.ಪರಿವಾರದ ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗುಣಮಟ್ಟದ ಬಟ್ಟೆಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಗ್ರಾಹಕರಿಗೆ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. ಇದರ ಪ್ರಯೋಜನವನ್ನು…
ತಾಲೂಕಾ ಪಂಚಾಯತಿ ಚುನಾವಣಾ ಮೀಸಲಾತಿಯಲ್ಲಿ ಬ ವರ್ಗಕ್ಕೆ ಅನ್ಯಾಯ, ಬಿಜೆಪಿಗರ ಆಕ್ಷೇಪ
ತಾಲೂಕಾ ಪಂಚಾಯತಿ ಚುನಾವಣಾ ಮೀಸಲಾತಿಯಲ್ಲಿ ಬ ವರ್ಗಕ್ಕೆ ಅನ್ಯಾಯ, ಬಿಜೆಪಿಗರ ಆಕ್ಷೇಪ ಈ ಕುರಿತು ಶನಿವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲಾಪುರ ಕ್ಷೇತ್ರದ ಯಲ್ಲಾಪುರ, ಮುಂಡಗೋಡ, ಬನವಾಸಿ ಭಾಗದಲ್ಲಿ “ಬ” ವರ್ಗಕ್ಕೆ ಸಂಬಂಧಿಸಿದ ಮರಾಠಾ, ಲಿಂಗಾಯತ, ಕ್ರಿಶ್ಚಿಯನ್ ಸಮುದಾಯವನ್ನು ಪ್ರತಿನಿಧಿಸುವವರ ಸಂಖ್ಯೆ 35 ರಿಂದ 40 ಸಾವಿರದಷ್ಟಿದೆ. ತಾ.ಪಂ. ಮೀಸಲಾತಿಯಲ್ಲಿ “ಬ” ವರ್ಗದ ಈ ಸಮುದಾಯದವರಿಗೆ ಪ್ರಾತಿನಿಧ್ಯ ದೊರಕದ ಕಾರಣ, ದೊಡ್ಡ ಸಂಖ್ಯೆಯಲ್ಲಿರುವ ಈ ಸಮುದಾಯಗಳಿಗೆ ಅನ್ಯಾಯವಾದಂತಾಗಿದೆ. ನಾವು ಇದನ್ನು ಖಂಡಿಸುತ್ತೇವೆ, ಮೀಸಲಾತಿಯನ್ನು ಮರುಪರಿಶೀಲನೆ ನಡೆಸಬೇಕು,…
ಸಂಸದ ಕಾಗೇರಿ ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಲೋಕಸಭೆಯ ಅಧಿವೇಶನದಲ್ಲಿ ಪ್ರದರ್ಶಿಸಲಿ: ಶಾಸಕ ಹೆಬ್ಬಾರ್
ಸಂಸದ ಕಾಗೇರಿಯವರು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಲೋಕಸಭೆಯ ಅಧಿವೇಶನದಲ್ಲಿ ಪ್ರದರ್ಶಿಸಲಿ: ಶಾಸಕ ಹೆಬ್ಬಾರ್ ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಶಾಸಕ ಶಿವರಾಮ ಹೆಬ್ಬಾರ್ ಅವರು, ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಆದೇಶದಿಂದ ಜನತೆಗೆ ಉಂಟಾಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕಾನೂನು ರೂಪಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಮನೆಯ ಹಕ್ಕಿನ ಬಗ್ಗೆ ಮಾತನಾಡುವ ಸಂಸದ ಕಾಗೇರಿ ಅವರು ಬಡ ಮತದಾರರ ಹಕ್ಕುಗಳ ಬಗ್ಗೆ…
ಜೀವನ ನಡೆಸುವುದು ಕಷ್ಟ ಎಂದು ನೇಣಿಗೆ ಶರಣಾದ ವ್ಯಕ್ತಿ
ಜೀವನ ನಡೆಸುವುದು ಕಷ್ಟ ಎಂದು ನೇಣಿಗೆ ಶರಣಾದ ವ್ಯಕ್ತಿ ದೂರಿನ ಪ್ರಕಾರ ತಾಲೂಕಿನ ಸಹಸ್ರಳ್ಳಿ ಸಮೀಪದ ಕಬ್ಬಿನಗುಳಿಯ 50 ವರ್ಷದ ಪುಂಡಲೀಕ ತುಕಾರಾಮ ಗಾವಡೆ ಎಂಬ ಎಂಬ ಕೃಷಿಕ ಈ ವರ್ಷ ಮಳೆ ಸರಿಯಾಗಿ ಬಂದಿಲ್ಲ, ನಾನು ಬೆಳೆ ಕೂಡ ಮಾಡಿಲ್ಲ, ಜೀವನ ನಡೆಸುವುದು ಕಷ್ಟವಾಗಿದೆ, ನಾನು ಇನ್ನು ಎರಡು ಮಕ್ಕಳ ಮದುವೆ ಮಾಡಬೇಕು ಎಂದು ಹೇಳುತ್ತಿದ್ದರು. ಇದೇ ವಿಷಯವನ್ನು ಪುಂಡಲೀಕ ತುಕಾರಾಮ ಗಾವಡೆ ಮನಸ್ಸಿಗೆ ಹಚ್ಚಿಕೊಂಡು ಅ.6 ರಂದು ಮಧ್ಯಾಹ್ನ 1.30 ಗಂಟೆಯಿಂದ ಅ.9 ಬೆಳಿಗ್ಗೆ…
ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ
ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ ಆರೋಪಿಗಳಾದ ಕಲಘಟಗಿಯ ಮಂಜುನಾಥ ತಂದೆ ಸೋಮಯ್ಯ ರುದ್ರಾಕ್ಷಿ ಹಾಗೂ ಅಲ್ತಾಪ್ ತಂದೆ ಹಜರೆಸಾಬ್ ಓದೇಕರ್ ಎಂಬುವವರು, ಅಶೋಕ ಲೈಲ್ಯಾಂಡ್ ವಾಹನದಲ್ಲಿ ಎರಡು ಹೋರಿಗಳು ಮತ್ತು ಒಂದು ಆಕಳು ಕರುವನ್ನು ಹಿಂಸಾತ್ಮಕವಾಗಿ ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗಿಸುತ್ತಿದ್ದಾಗ, ಯಲ್ಲಾಪುರ ಪೊಲಿಸರು ಯಲ್ಲಾಪುರ ಪಟ್ಟಣದ ಮಲಬಾರ್ ಹೊಟೇಲ್ ಸಮೀಪ ದಾಳಿ ನಡೆಸಿ ಆರೋಪಿಗಳನ್ನು ಹಾಗೂ ಜಾನುವಾರುಗಳನ್ನು ವಾಹನ ಸಮೇತವಾಗಿ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ. ಕಪ್ಪು ಬಣ್ಣದ ಎರಡು ಹೋರಿಗಳು ಹಾಗೂ ಕಂದು…
ಬಿಜೆಪಿ ಹೋರಾಟಕ್ಕೆ ಸಂದ ಜಯ ಎಂದ ಸದಾನಂದ ಭಟ್ಟ
ಬಿಜೆಪಿ ಹೋರಾಟಕ್ಕೆ ಸಂದ ಜಯ ಎಂದ ಸದಾನಂದ ಭಟ್ಟ ಈ ಕುರಿತು ಗುರುವಾರ ಪ್ರಕಟಣೆ ನೀಡಿದ ಅವರು, ಈ ಆದೇಶವನ್ನು ಶಾಶ್ವತವಾಗಿ ಹಿಂಪಡೆಯದೆ ಮುಂದಿನ ಆದೇಶದ ವರೆಗೆ ಪ್ರಕ್ರಿಯೆ ಕೈಗೊಳ್ಳದಂತೆ ಸೂಚಿಸಿರುವುದು ಅತಿಕ್ರಮಣದಾರರ ಮೇಲಿನ ತೂಗುಗತ್ತಿಯಾಗಿದೆ. ಈ ಆದೇಶದ ಕುರಿತು ಮತ್ತು ಸಂಸದ ಕಾಗೇರಿ ಮತ್ತು ಬಿಜೆಪಿ ಹೋರಾಟದ ಕುರಿತು ಕಾಂಗ್ರೆಸ್ ಶಾಸಕರು ಇಷ್ಟು ದಿನ ತಮಗೆ ತೋಚಿದಂತೆ ಆರೋಪ ಮಾಡಿ, ಮಾತನಾಡಿ ಈಗ ತಮ್ಮಿಂದಲೇ ಆದೇಶ ಸ್ಥಗಿತವಾಗಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವುದು ಯಾವ ನೈತಿಕತೆ? ಸದ್ಯದಲ್ಲಿನ…
Something went wrong. Please refresh the page and/or try again.
website created by – JYOTRADITYA BHAT YELLAPUR
9481781038
Get new content delivered directly to your inbox.
